ಹೊಸರುಚಿ ಸರಣಿ-1
ಮೈವೆಬ್‌ದುನಿಯಾದಲ್ಲಿ ಇದು ನಮ್ಮ ಹೊಸ ಪ್ರಯತ್ನ. ಹೊಸ ಅಡುಗೆಗಳನ್ನು ತಯಾರಿಸುವ ಲೇಖನಗಳ ಸರಣಿಯನ್ನು ಆರಂಭಿಸುತ್ತಿದ್ದೇನೆ. ಆಗಾಗ್ಗೆ ನಿಮಗೆ ಹೊಸರುಚಿಯನ್ನು ಉಣಬಡಿಸುವ ಪ್ರಯತ್ನ ನಮ್ಮದು. ಸವಿಯುವ ಭಾಗ್ಯ ನಿಮ್ಮದು!!
ಬೆಳಗ್ಗಿನ ತಿಂಡಿಗೆ ಉಪ್ಪಿಟ್ಟು, ಅವಲಕ್ಕಿ, ರೊಟ್ಟಿಯನ್ನು ತಿಂದು ಬೇಸರವಾಗಿದೆಯೇ. ಇಲ್ಲಿದೆ ಹೊಸ ಪ್ರಕಾರದ ಬೆಳಗ್ಗಿನ ತಿಂಡಿ. ಅದೇ ಬಾಳೆಹಣ್ಣಿನ ದೋಸೆ.
ತಯಾರಿಸಲು ಬೇಕಾಗುವ ಸಮಯ: ಹತ್ತು ನಿಮಿಷ, ಜೊತೆಗೆ ನೆನೆಸಲು ಬೇಕಾಗುವ ಸಮಯ.
ಬೇಕಾಗುವ ಸಾಮಗ್ರಿಗಳು:
2 ಕಪ್ ಬೇಯಿಸದ ಅಕ್ಕಿ.
ಅರ್ಧ ಕಪ್ ತೆಂಗಿನತುರಿ
3 ಬಲಿತ ಬಾಳೆಹಣ್ಣಗಳು
ಮುಕ್ಕಾಲು ಕಪ್ ಬೆಲ್ಲ
ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ: ಅಕ್ಕಿಯನ್ನು ಸುಮಾರು 4 ಗಂಟೆಗಳ ಕಾಲ ನೆನೆಸಿಡಿ. ನಂತರ ಅದನ್ನು ತೆಂಗಿನತುರಿಯೊಂದಿಗೆ ಬೆರೆಸಿ ಚೆನ್ನಾಗಿ ರುಬ್ಬಿರಿ. ಬೆಲ್ಲ ಮತ್ತು ಬಾಳೆಹಣ್ಣನ್ನು ಸೇರಿಸಿ ಮತ್ತೆ ರುಬ್ಬಿರಿ. ಬೇಕಾದಷ್ಟು ನೀರನ್ನು ಹಾಕಿ ಚೆನ್ನಾಗಿ ಕಲಕಿ. ಇದೀಗ ಬಾಳೆಹಣ್ಣು ದೋಸೆಗೆ ಬೇಕಾದ ಹಿಟ್ಟು ಸಿದ್ದ. ಬಾಣಲೆಯನ್ನು ಚೆನ್ನಾಗಿ ಕಾಯಿಸಿ, ದೋಸೆಯನ್ನು ತಯಾರಿಸಿ. ಇದೀಗ ರುಚಿಕಟ್ಟಾದ ಬಾಳೆಹಣ್ಣಿನ ದೋಸೆ ಸಿದ್ದ. ನೀವು ತಯಾರಿಸಿ, ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
(ಆಧಾರ)
ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು