Welcome, Guest   [ Register | Sign In | Take a tour | Adult Filter: On ]

ಮುಂಬೈನ ಹೊಸ ಸೊಬಗು ಬಾಂದ್ರಾ-ವರ್ಲಿ ಸಮುದ್ರ ಸೇತು


ಭಾರತೀಯ ವಾಣಿಜ್ಯ ನಗರಿ ಮುಂಬೈನ ಹೊಸ ಸೊಬಗಾದ "ಬಾಂದ್ರಾ-ವರ್ಲಿ" ಸೀ ಲಿಂಕ್ ಇಂದು ದೇಶಕ್ಕೆ ಸಮರ್ಪಿತಗೊಳ್ಳಲಿದೆ. ಈಗಾಗಲೇ ಟ್ರಾಫಿಕ್‌ನಿಂದ ತತ್ತರಿಸಿರುವ ಮುಂಬೈಗೆ ಈ ಸಮುದ್ರ ಸೇತು ಜೀವರಕ್ಷಕದಂತೆ ಸಹಾಯ ಮಾಡಲಿದೆ ಎಂದು ಈಗಾಗಲೇ ಪ್ರತಿಬಿಂಬಿಸಲಾಗಿದೆ.



ಸುಮಾರು 1600 ಕೋಟಿ ರೂ ವೆಚ್ಚದಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ದಿ ಪ್ರಾಧಿಕಾರಕ್ಕಾಗಿ ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿ ನಿರ್ಮಿಸಿರುವ ಈ ಸೇತುವೆ ಸುಮಾರು 5 ವರ್ಷಗಳು ತಡವಾಗಿ ಇಂದು ಉದ್ಭಾಟನೆಗೊಳ್ಳಲಿದೆ. ಈ ಸಮುದ್ರ ಸೇತು ಬಾಂದ್ರಾ ಮತ್ತು ವರ್ಲಿ ನಡುವಿನ ಪ್ರಯಾಣದ ಅಂತರದ ಪ್ರಯಾಣವನ್ನು ಸುಮಾರು 60-70 ನಿಮಿಷಗಳಿಂದ 8 ನಿಮಿಷಗಳಿಗೆ ಕಡಿಮೆ ಮಾಡಲಿದೆ. ಸದ್ಯ ಪಶ್ಚಿಮ ಉಪನಗರದಿಂದ ಮುಂಬೈಗೆ ಸಂಪರ್ಕಿಸಲು ಮಾಹಿಮ್ ಕಾಸ್‌ವೇ ಮಾತ್ರ ಇದ್ದು, ಇದು ಈಗಾಗಲೇ ಟ್ರಾಫಿಕ್‌ನಿಂದ ತತ್ತರಿಸುತ್ತಿದೆ. ಜನದಟ್ಟಣೆಯ ಬೆಳಗ್ಗಿನ ಮತ್ತು ಸಂಜೆಯ ಸಮಯದಲ್ಲಿ ಮಾಹಿಮ್ ಕೇಸ್‌ವೇಯಿಂದ ವರ್ಲಿಯ ದೂರವಾದ 8 ಕಿಮೀಯನ್ನು ಕ್ರಮಿಸಲು ಈಗ 40 ನಿಮಿಷಗಳಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಈ ಸಮಯವನ್ನು ಬಾಂದ್ರಾ-ಕುರ್ಲಾ ಸೀ ಲಿಂಕ್ ಕಡಿಮೆ ಮಾಡಲಿದೆ.

ಈ ಸಮುದ್ರ ಸೇತುವಿನ ಉದ್ದ 4.7 ಕಿಮೀಗಳಾಗಿದ್ದು, ಲೆಕ್ಕಾಚಾರ ಮಾಡಿದರೆ ಕುತುಬ್ ಮಿನಾರ್‌ನ 63 ಪಟ್ಟು ಆಗುತ್ತದೆ. ಈ ಸೇತುವಿನ ತೂಕ 6.7 ಲಕ್ಷ ಟನ್‌ಗಳು ಅಂದರೆ 50,000 ಆಫ್ರಿಕಾ ಆನೆಗಳ ತೂಕದಷ್ಟು.



ಮುಂಬೈನ ಈ ಹೊಸ ಸೊಬಗು ಈಗಾಗಲೇ ಹೊಸ ಪ್ರವಾಸಿ ತಾಣವಾಗುವ ಎಲ್ಲಾ ಸೂಚನೆಗಳು ಕಂಡುಬರುತ್ತಿವೆ. ಈಗಾಗಲೇ ಬ್ರಹನ್ಮುಂಬಯಿ ಎಲೆಕ್ಟ್ರಿಕ್ ಸಪ್ಲೈ ಎಂಡ್ ಟ್ರಾನ್ಸ್‌ಪೋರ್ಟ್ ಸಂಸ್ಥೆ (ಬೆಸ್ಟ್) ಬಾಂದ್ರಾ ಮತ್ತು ಕುರ್ಲಾ ಸಮುದ್ರ ಸೇತುವೆಯನ್ನು ಜನಸಾಮಾನ್ಯರು ವೀಕ್ಷಿಸಲು ಸಹಾಯವಾಗುವಂತೆ ಬಸ್ ಸಂಚಾರವನ್ನು ಆರಂಭಿಸುವ ಬಗ್ಗೆಯೂ ಯೋಚಿಸುತ್ತಿದೆ. ಈಗ ಈ ಸಮದ್ರ ಸೇತುವೆಯ ಮೂಲಕ ಒಮ್ಮುಖ ಸಂಚಾರಕ್ಕೆ ರೂ 50 ಹಾಗೂ ಹೋಗಿಬರಲು ರೂ 75 ರೂ ಟೋಲ್ ಫೀ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಆದರೆ ಜುಲೈ 1 ರಿಂದ ಜುಲೈ 5 ರವೆಗೆ ಸಂಚರಿಸುವ ವಾಹನಗಳಿಗೆ ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲ.

ಒಟ್ಟಿನಲ್ಲಿ ಮುಂಬೈ ಮಹಾನಗರಿಯಲ್ಲಿನ ಈ ಹೊಸ ನಿರ್ಮಾಣ ಆಧುನಿಕ ಭಾರತದ ನಿರ್ಮಾಣ ಕಾರ್ಯಗಳಲ್ಲಿ ಖ್ಯಾತಿಯನ್ನು ಗಳಿಸಿದೆ.

(ಆಧಾರ)

ಪ್ರತಿಸ್ಪಂದನಗಳು

Re: ಮುಂಬೈನ ಹೊಸ ಸೊಬಗು ಬಾಂದ್ರಾ-ವರ್ಲಿ ಸಮುದ್ರ ಸೇತು
ಕೆಲವೊಂದು ಯೋಜನೆಗಳು ಸರಕಾರಿ ದಾಖಲೆಗಳಲ್ಲಿ ಮಾತ್ರ ಇದ್ದು, ಯೋಜನೆಯ ಪ್ರದೇಶದಲ್ಲಿ ಏನೂ ಆಗದಿರುವುದಿದೆ. ಅಂತಹುದರಲ್ಲಿ ಐದು ವರ್ಷ ತಡವಾದರೂ, ಉದ್ಘಾಟನೆಯಾಯಿತಲ್ಲ ಈ ಬಾಂದ್ರಾ-ವರ್ಲಿ ಸೀ ಲಿಂಕ್ ಅದೇ ಖುಷಿ:-)
Re: ಮುಂಬೈನ ಹೊಸ ಸೊಬಗು ಬಾಂದ್ರಾ-ವರ್ಲಿ ಸಮುದ್ರ ಸೇತು
ಮುಂಬೈನ ಟ್ರಾಫಿಕ್‌ನಿಂದ ಕಷ್ಟಪಡುತ್ತಿರುವ ಜನರು ಈ ಸೇತುವೆಯ ಮೂಲಕವಾದರೂ ಸ್ವಲ್ಪ ಸಂತೋಷಪಡಬಹುದು. ಜುಲೈ 1 ರಿಂದ 5 ರ ಒಳಗೆ ಒಂದು ಬಾರಿ ಆ ಸೇತುವೆಯ ಮೂಲಕ ಹೋಗಿ ಬರಬೇಕೆಂದಿದ್ದೇನೆ... ತೆರಿಗೆ ಇಲ್ಲ ಫ್ರೀ ಅಲ್ವಾ...!!!
ಹಕ್ಕು ನಿರಾಕರಣೆ